ಕನ್ನಡ ಅಭಿವೃದ್ಧಿ ಪ್ರಾಧಿಕಾರ : ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹಾಗೂ ಕರ್ನಾಟಕದ ಸಮಸ್ತ ಮಾಹಿತಿಗಳನ್ನು ದಾಖಲುಗೊಳಿಸುವ ಉದ್ದೇಶ ಹೊಂದಿದೆ. ಸರ್ಕಾರದ ಒಂದು ಕಾರ್ಯ ಯೋಜನೆಯ ಅಂಗವಾಗಿ ಸ್ಥಾಪಿತವಾದ. ಸಂಸ್ಥೆ. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರಲು ಸೂಕ್ತ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡುವ ಉದ್ದೇಶದ ಹಿನ್ನೆಲೆಯಲ್ಲಿ 1983 ಜೂನ್ 23ರಂದು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಕರ್ನಾಟಕದ ಗಡಿ ಸಮಸ್ಯೆಯನ್ನೂ ಈ ಸಮಿತಿಯ ವ್ಯಾಪ್ತಿಗೆ ಸೇರಿಸಿದ ತರುವಾಯ 1984 ಏಪ್ರಿಲ್ 18ರಂದು ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಎಂದು ಪುನರ್ ನಾಮಕರಣ ಮಾಡಲಾಯಿತು. ಅನಂತರ 1990 ಅಕ್ಟೋಬರ್ 14ರಂದು ಸಮಿತಿಯ ಉದ್ದೇಶಗಳನ್ನೂ ಅದಿsಕಾರ ವ್ಯಾಪ್ತಿಗಳನ್ನೂ ಹಿಗ್ಗಿಸಿ ಕನ್ನಡ ಅಬಿsವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲಾಯಿತು. ಆಡಳಿತದ ಎಲ್ಲ ಹಂತದಲ್ಲಿ ಕನ್ನಡವನ್ನು ಬಳಸುವಂತೆ ಚಾಲನೆ ನೀಡುವುದು, ಪರಿಶೀಲಿಸುವುದು, ಕನ್ನಡವನ್ನು ಬಳಸದೇ ಹೋದ ಸಂದರ್ಭದಲ್ಲಿ ಶಿಸ್ತು ಕ್ರಮದ ಜಾರಿ ಮುಂತಾದ ಅದಿsಕಾರಗಳನ್ನು ಶಾಸನಬದ್ಧಗೊಳಿಸಿ 1992 ಫೆಬ್ರವರಿ 6ರಂದು ಈ ಮಂಡಳಿಯನ್ನು ಕನ್ನಡ ಅಬಿsವೃದ್ಧಿ ಪ್ರಾದಿsಕಾರ ಎಂಬ ಹೆಸರಿನಲ್ಲಿ ಉನ್ನತೀಕರಿಸಲಾಯಿತು. ಈ ಪ್ರಾದಿsಕಾರಕ್ಕೆ ಶಾಸನಬದ್ಧ ಅದಿsಕಾರವನ್ನು ನೀಡಲು ಕನ್ನಡ ಅಬಿsವೃದ್ಧಿ ಪ್ರಾದಿsಕಾರ ಅದಿsನಿಯಮ ಕಾಯಿದೆ ಜಾರಿಗೊಳಿಸಲಾಗಿದೆ (1995).

ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ರಕ್ಷಣೆಯಲ್ಲಿ ಜನತೆಯ ಆಶೋತ್ತರಗಳನ್ನು ರಚನಾತ್ಮಕವಾಗಿ ಕಾರ್ಯರೂಪಕ್ಕೆ ತರುವುದು ಪ್ರಾದಿsಕಾರದ ಮುಖ್ಯ ಧ್ಯೇಯ. ಆಡಳಿತದಲ್ಲಿ ಕನ್ನಡದ ಬಳಕೆ ಮತ್ತು ಸರೋಜಿನಿ ಮಹಿಷಿ ವರದಿಯ ಅನುಷಾವಿನಗಳು ಪ್ರಾದಿsಕಾರದ ಮುಖ್ಯ ಜವಾಬ್ದಾರಿಗಳಾಗಿವೆ. ಶಿಕ್ಷಣಕ್ಕೆ ಸಂಬಂದಿsಸಿದಂತೆ 1 ರಿಂದ 10ನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಪ್ರಾದಿsಕಾರ ಚಾರಿತ್ರಿಕ ಮಹತ್ವದ ವರದಿಯನ್ನು ಸಲ್ಲಿಸಿದೆ. ರಾಜ್ಯದಲ್ಲಿರುವವರೆಲ್ಲ ಕನ್ನಡ ಕಲಿಯಬೇಕೆಂಬ ಆಶಯದಿಂದ ಅಲ್ಪಸಂಖ್ಯಾತರಿಗೆ ಕನ್ನಡ ಕಲಿಸುವ ಯೋಜನೆ ಹಾಕಿಕೊಂಡಿದೆ.

ಪ್ರಾದಿsಕಾರದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಸರ್ಕಾರ ನೇಮಿಸಿದ ಒಬ್ಬ ಅಧ್ಯಕ್ಷರಿರುತ್ತಾರೆ. ಇವರ ಅದಿsಕಾರಾವದಿs ಮೂರು ವರ್ಷ. ಪ್ರಾದಿsಕಾರಕ್ಕೆ ಏಳು ಜನ ಅದಿsಕಾರೇತರ ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳು ಇದರ ಪದನಿಮಿತ್ತ ಸದಸ್ಯರು. ಜಿಲ್ಲಾದಿsಕಾರಿ ದರ್ಜೆಯ ಒಬ್ಬ ಅದಿsಕಾರಿಯನ್ನು ಸರ್ಕಾರ ಕಾರ್ಯದರ್ಶಿಯಾಗಿ ನೇಮಿಸುವುದು. ಈ ತನಕ ಸಿದ್ಧರಾಮಯ್ಯ, ಜಿ.ನಾರಾಯಣ, ಎಚ್.ನರಸಿಂಹಯ್ಯ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಿನ ಅಧ್ಯಕ್ಷರು ಮುಖ್ಯಮಂತ್ರಿ ಚಂದ್ರು. ಮಾಹಿತಿ ತಂತ್ರಜ್ಞಾನದ ಪ್ರವಾಹದಲ್ಲಿ ಅನ್ಯಭಾಷೆಗಳಿಂದ ಅದರಲ್ಲೂ ಇಂಗ್ಲಿಷಿನಿಂದ ಕನ್ನಡವನ್ನು ರಕ್ಷಿಸುವ ಕೆಲಸ ಪ್ರಾದಿsಕಾರದ ಮುಂದಿರುವ ಬಹು ದೊಡ್ಡ ಸವಾಲಾಗಿದೆ.	(ಎಸ್.ಬಿಎಚ್ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ